- ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs)
- ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) 3, 4, 5
ಸವಾಲು
ಹಿಂದುಳಿದ ಮತ್ತು ಗ್ರಾಮೀಣ ಸಮುದಾಯಗಳ ಅನೇಕ ಹದಿಹರೆಯದ ಹೆಣ್ಣುಮಕ್ಕಳಿಗೆ ಋತುಚಕ್ರ ನೈರ್ಮಲ್ಯದ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ, ಬೇಕಾದ ಸಾಮಗ್ರಿಗಳೂ ಸಿಗುವುದಿಲ್ಲ. ಇದು ಅವರ ಓದಿಗೆ ದೊಡ್ಡ ಅಡ್ಡಿಯಾಗುತ್ತದೆ. ಸರಿಯಾದ ಮಾರ್ಗದರ್ಶನವಿಲ್ಲದೆ, ಈ ವಿಷಯವನ್ನು ನಿರ್ಭಯವಾಗಿ ಮಾತನಾಡುವ ವಾತಾವರಣವೂ ಇಲ್ಲದೆ, ಹೆಣ್ಣುಮಕ್ಕಳು ಆರೋಗ್ಯ ಸಮಸ್ಯೆಗಳನ್ನೂ ಮಾನಸಿಕ ಮುಜುಗರವನ್ನೂ ಎದುರಿಸುತ್ತಾರೆ. ಇದರಿಂದ ಶಾಲೆಗೆ ಗೈರುಹಾಜರಿ ಹೆಚ್ಚುತ್ತದೆ, ಕಲಿಕೆಗೆ ತೊಡಕಾಗುತ್ತದೆ.
ನಾವು ಮಾಡುತ್ತಿರುವುದು
ಆರೋಗ್ಯದ ಸಮಸ್ಯೆಯಿಂದ ಯಾವ ಮಗುವಿನ ಓದೂ ನಿಲ್ಲಬಾರದು. ಅದಕ್ಕಾಗಿ ಸಮರ್ಪಕ ಸೇವಾ ಟ್ರಸ್ಟ್ ಆರೋಗ್ಯ ಮತ್ತು ಶಿಕ್ಷಣವನ್ನು ಜೊತೆಜೊತೆಯಾಗಿ ನೋಡುತ್ತದೆ. ತನ್ನ ಮುಖ್ಯ ಶಿಕ್ಷಣ ಕಾರ್ಯಕ್ರಮಗಳಲ್ಲೇ ಋತುಚಕ್ರದ ಬಗ್ಗೆ ಸಂಪೂರ್ಣ ಅರಿವು ಮತ್ತು ವೈಯಕ್ತಿಕ ನೈರ್ಮಲ್ಯದ ಆಪ್ತಸಮಾಲೋಚನೆಯನ್ನು ಸೇರಿಸಿದೆ. ಹೆಣ್ಣುಮಕ್ಕಳಿಗೆ ಒಂದು ಗಂಟೆಯ ಆಪ್ತಸಮಾಲೋಚನಾ ತರಗತಿ ಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ.
ಯೋಜಿತ, ಪ್ರತ್ಯೇಕ ತರಗತಿಗಳ ಮೂಲಕ ಈ ಕಾರ್ಯಕ್ರಮ ಅರಿವು ಮೂಡಿಸುತ್ತದೆ, ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸುತ್ತದೆ ಮತ್ತು ಹೆಣ್ಣುಮಕ್ಕಳ ಘನತೆಯನ್ನು ಕಾಪಾಡುತ್ತದೆ. ಇದು ಒಮ್ಮೆ ನಡೆಸಿ ಮುಗಿಸುವ ಉಪನ್ಯಾಸವಲ್ಲ; ಶಾಲಾ ಜೀವನದ ಭಾಗವಾಗಿ ನಿಯಮಿತವಾಗಿ ನಡೆಯುತ್ತದೆ.
ಪರಿಣಾಮ ಮತ್ತು ಸುರಕ್ಷಿತ ವಾತಾವರಣ
ಹೆಣ್ಣುಮಕ್ಕಳು ಶಾಲೆಯಲ್ಲಿ ಉಳಿದು ಮುಂದೆ ಬರಲು ಬೇಕಾದ ಕಲಿಕೆಯ ಮಾರ್ಗದರ್ಶನ ಮತ್ತು ಆರೋಗ್ಯ ರಕ್ಷಣೆಯ ಅರಿವು ಎರಡೂ ಅವರಿಗೆ ಸಿಗುವಂತೆ ಈ ಕಾರ್ಯಕ್ರಮ ನೋಡಿಕೊಳ್ಳುತ್ತದೆ.
ಋತುಚಕ್ರ ನೈರ್ಮಲ್ಯದ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಈ ಕಾರ್ಯಕ್ರಮ ವಿದ್ಯಾರ್ಥಿನಿಯರ ಗೈರುಹಾಜರಿಯನ್ನು ಕಡಿಮೆ ಮಾಡಲು ಶ್ರಮಿಸುತ್ತದೆ. ಇದರಿಂದ ಅವರು ಆತ್ಮವಿಶ್ವಾಸದಿಂದ, ಆರೋಗ್ಯವಾಗಿ ಓದಿನತ್ತ ಗಮನ ಹರಿಸುತ್ತಾರೆ.
ಇದು ಹೇಗೆ ನಡೆಯುತ್ತದೆ
ಹದಿಹರೆಯದ ಹೆಣ್ಣುಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತೆ ಯೋಜಿತ ತರಗತಿಗಳನ್ನು ನಡೆಸುತ್ತೇವೆ
ಕಿಟ್‌ಗಳನ್ನು ವಿತರಿಸಿ, ನೈರ್ಮಲ್ಯ ಸಾಮಗ್ರಿಗಳು ಸುಲಭವಾಗಿ ಸಿಗುವಂತೆ ಮಾಡುತ್ತೇವೆ
ಮನೆಯಲ್ಲೂ ಶಾಲೆಯಲ್ಲೂ ಬೆಂಬಲ ಮುಂದುವರಿಯಲು ಅರಿವು ಕಾರ್ಯಾಗಾರಗಳನ್ನು ನಡೆಸುತ್ತೇವೆ
ಹಾಜರಾತಿಯನ್ನು ಗಮನಿಸುತ್ತೇವೆ; ಗೈರುಹಾಜರಿ ಕಡಿಮೆಯಾಗಿರುವುದನ್ನು ದಾಖಲಿಸಿದ್ದೇವೆ



