- ಎಲ್ಲಿ
- ದಕ್ಷಿಣ ಬೆಂಗಳೂರು
- ಜೊತೆಗೆ
- Surin Industries
- ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs)
- ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) 2
ಕಾರ್ಯಕ್ರಮದ ಪರಿಚಯ
ಆಯುರ್ವೇದ ಮತ್ತು ಪೌಷ್ಟಿಕ ಆಹಾರವನ್ನು ಎಚ್ಚರಿಕೆಯಿಂದ ಜೋಡಿಸಿ, ತಾಯಿ ಮತ್ತು ಮಗು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಗರ್ಭ ಸಂಸ್ಕಾರ ಕಾರ್ಯಕ್ರಮದ ಉದ್ದೇಶ. Surin Industries ಸಂಸ್ಥೆಯ ನೆರವಿನಿಂದ, ದಕ್ಷಿಣ ಬೆಂಗಳೂರಿನ ಕಟ್ಟಡ ಕಾರ್ಮಿಕರ ಸಮುದಾಯಗಳಲ್ಲಿ ಆರೋಗ್ಯ ಸೇವೆ ಸುಲಭವಾಗಿ ಸಿಗದ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಈ ಕಾರ್ಯಕ್ರಮ ಸಮಗ್ರ ಆರೈಕೆ ನೀಡುತ್ತದೆ. ಆಯುರ್ವೇದ ಪೌಷ್ಟಿಕ ಆಹಾರದ ಜೊತೆಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (PHC) ನಿಯಮಿತ ತಪಾಸಣೆಯೂ ನಡೆಯುತ್ತದೆ.
ಕಾರ್ಯಕ್ರಮದ ರಚನೆ ಮತ್ತು ಸೇವೆಗಳು
ಇದು ಒಮ್ಮೆಯ ಭೇಟಿಗೆ ಸೀಮಿತವಲ್ಲ. ಹೆರಿಗೆಗೆ ಮೊದಲು ಒಂಬತ್ತು ತಿಂಗಳು ಮತ್ತು ಹೆರಿಗೆಯ ನಂತರ ಮೂರು ವರ್ಷ, ದೀರ್ಘಕಾಲ ಬೆಂಬಲ ನೀಡುವಂತೆ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಮೊದಲಿನಿಂದ ಕೊನೆಯವರೆಗೆ PHC ತಪಾಸಣೆಗಳು ಮತ್ತು ಅಗತ್ಯ ಲಸಿಕೆಗಳು ತಪ್ಪದೆ ಸಿಗುವಂತೆ ನೋಡಿಕೊಳ್ಳುವುದು ಇದರ ಗುರಿ.
ಫಲಿತಾಂಶ ಮತ್ತು ಪರಿಣಾಮ
ತಾಯಂದಿರ ಪೌಷ ್ಟಿಕತೆ ಮತ್ತು ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುವುದು, ಆರೋಗ್ಯಕರ ಹೆರಿಗೆ ಮತ್ತು ಹೆರಿಗೆಯ ನಂತರದ ಚೇತರಿಕೆಗೆ ನೆರವಾಗುವುದು ಈ ಕಾರ್ಯಕ್ರಮದ ಉದ್ದೇಶ.
ತಾಯಂದಿರ ಮಾತು
ಈ ಕಾರ್ಯಕ್ರಮ ತಾಯಂದಿರ ಬದುಕಿನ ಮೇಲೆ ಬೀರಿದ ಆಳವಾದ ಪರಿಣಾಮ ಅವರ ಮಾತುಗಳಲ್ಲೇ ಕಾಣುತ್ತದೆ. ಹೆರಿಗೆಯ ನಂತರ ಬೇಗ ಚೇತರಿಸಿಕೊಂಡೆವು, ನಮಗೆ ತುಂಬಾ ಬೆಂಬಲ ಸಿಕ್ಕಿತು, ಮಕ್ಕಳು ಚೆನ್ನಾಗಿ ಬೆಳೆದರು ಎಂದು ಅವರು ಹೇಳುತ್ತಾರೆ.
ಇದು ಹೇಗೆ ನಡೆಯುತ್ತದೆ
ಫಲಾನುಭವಿಗಳ ಆಯ್ಕೆ ಮತ್ತು ಆರೋಗ್ಯ ಪರಿಶೀಲನೆ → ಅರಿವು ಮೂಡಿಸುವುದು ಮತ್ತು ಆಸ್ಪತ್ರೆಗಳೊಂದಿಗೆ ಪಾರ್ಟ್‌ನರ್‌ಶಿಪ್ → ಆಯುರ್ವೇದ ಕಿಟ್‌ಗಳ ವಿತರಣೆ → ಹೆರಿಗೆಗೆ ಮೊದಲು ಮತ್ತು ನಂತರ ನಿರಂತರ ಆರೈಕೆ
ಈ ಕಾರ್ಯಕ್ರಮಕ್ಕೆ ಬರುವ ಮೊದಲು, ಗರ್ಭಾವಸ್ಥೆ ಎಂದರೆ ಹೇಗೋ ದಿನ ದೂಡುವುದು ಎಂದುಕೊಂಡಿದ್ದೆ. ಈಗ ಒಂದು ಸುಂದರ ಘಳಿಗೆಗೆ ಸಿದ್ಧವಾಗುತ್ತಿದ್ದೇನೆ ಅನ್ನಿಸುತ್ತಿದೆ.
ಗರ್ಭ ಸಂಸ್ಕಾರ ಕಾರ್ಯಕ್ರಮದ ಒಬ್ಬ ತಾಯಿ