- ಆರಂಭ
- 2020–21
- ಎಲ್ಲಿ
- ಕರ್ನಾಟಕದ 15 ಜಿಲ್ಲೆಗಳು · ಸರ್ಕಾರಿ ಮತ್ತು ಅನುದಾನಿತ ಶಾಲೆಗಳು
- ವಿಶ್ವಸಂಸ್ಥೆಯ ಸುಸ್ಥಿರ ಅಭಿ ವೃದ್ಧಿ ಗುರಿಗಳು (SDGs)
- ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) 4, 5, 10
ಕಾರ್ಯಕ್ರಮದ ಪರಿಚಯ
ಎಸ್‌ಎಸ್‌ಎಲ್‌ಸಿ ಟಾಪ್ ಅಪ್ ಕಾರ್ಯಕ್ರಮ 2020–21ರಲ್ಲಿ ಆರಂಭವಾಯಿತು. ಇದರ ಹಿಂದಿನ ಯೋಚನೆ ಸರಳ. ಗ್ರಾಮೀಣ ವಿದ್ಯಾರ್ಥಿಗಳ ಬದುಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಒಂದು ಮಹತ್ವದ ಘಟ್ಟ. ಆದರೆ ದೂರ ಮತ್ತು ಹೆಚ್ಚುವರಿ ಟ್ಯೂಷನ್‌ನ ಖರ್ಚಿನಿಂದಾಗಿ ಅನೇಕರಿಗೆ ಸರಿಯಾದ ಸಿದ್ಧತೆ ಸಿಗುವುದಿಲ್ಲ. ಕಡಿಮೆ ವೆಚ್ಚದ ಈ ಕಾರ್ಯಕ್ರಮವನ್ನು ಸ್ಥಿರವಾದ, ದಾಖಲೆಗಳ ಮೂಲಕ ಪರಿಶೀಲಿಸಬಹುದಾದ ಮತ್ತು ರಾಜ್ಯದ ಸರಾಸರಿಗಿಂತ ಉತ್ತಮ ಫಲಿತಾಂಶ ನೀಡುವಂತೆ ರೂಪಿಸಲಾಗಿದೆ. ವಿದ್ಯಾರ್ಥಿನಿಯರಿಗೂ ಸಮಾನ ಅವಕಾಶ ಸಿಗುವಂತೆ ವಿಶೇಷ ಗಮನ ನೀಡಲಾಗುತ್ತದೆ.
ಕಾರ್ಯಕ್ರಮ ನಡೆಯುವ ರೀತಿ
ನವೆಂಬರ್‌ನಿಂದ ಫೆಬ್ರವರಿವರೆಗೆ, 4 ತಿಂಗಳು, ಶಾಲೆಯ ಸಮಯದ ನಂತರ ಉಚಿತ ತರಬೇತಿ ನಡೆಯು ತ್ತದೆ. ಶಾಲೆಯ ನಿಯಮಿತ ಅವಧಿಯ ಜೊತೆಗೆ ಇದಕ್ಕೆಂದೇ ವಾರದ ವೇಳಾಪಟ್ಟಿ ಇರುತ್ತದೆ:
ವಾರದ ದಿನಗಳಲ್ಲಿ: ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್ · ಶನಿವಾರ ಇವುಗಳ ಜೊತೆಗೆ ವ್ಯಕ್ತಿ ವಿಕಾಸ: ವ್ಯಕ್ತಿತ್ವ, ಸಂವಹನ, ಆತ್ಮವಿಶ್ವಾಸ ಮತ್ತು ವೃತ್ತಿ ಮಾರ್ಗದರ್ಶನ
ಅಂದರೆ, ವಾರದ ಪ್ರತಿ ದಿನ ಮೂರು ಹೆಚ್ಚುವರಿ ತರಗತಿಗಳು ನಡೆಯುತ್ತವೆ. ಶನಿವಾರ ಮೂರು ತರಗತಿಗಳ ಜೊತೆಗೆ ಒಂದು ವ್ಯಕ್ತಿ ವಿಕಾಸ (ವ್ಯಕ್ತಿತ್ವ ವಿಕಸನ) ತರಗತಿಯೂ ಇರುತ್ತದೆ.
ಮೌಲ್ಯಮಾಪನದ ಹಂತಗಳು
ಈ ಕಾರ್ಯಕ್ರಮ ಅಂಕಿ-ಅಂಶಗಳ ಆಧಾರದಲ್ಲಿ ನಡೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಮೂರು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ. ತರಗತಿಯ ಸರಾಸರಿಯನ್ನಷ್ಟೇ ಅಲ್ಲ, ಪ್ರತಿ ವಿದ್ಯಾರ್ಥಿಯ ಪ್ರಗತಿಯನ್ನು ಅವರದೇ ಗುರಿಗೆ ಹೋಲಿಸಿ ನೋಡಲಾಗುತ್ತದೆ.
ತರಬೇತಿ ಪಡೆದ ವಿದ್ಯಾರ್ಥಿಗಳ ಅಂಕಗಳು ಆರಂಭಿಕ ಪರೀಕ್ಷೆಗೆ ಹೋಲಿಸಿದರೆ ಸರಾಸರಿ ಶೇ. 20 ಕ್ಕಿಂತ ಹೆಚ್ಚು ಏರುತ್ತವೆ.
ಆರಂಭಿಕ ಪರೀಕ್ಷೆ → ಮಧ್ಯಂತರ ಪರೀಕ್ಷೆ → ಅಂತಿಮ ಪರೀಕ್ಷೆ
ಪರಿಣಾಮ ಮತ್ತು ವ್ಯಾಪ್ತಿ: ಆರು ವರ್ಷಗಳ ಒಟ್ಟು ಸಾಧನೆ
- ತಲುಪಿದ ಜಿಲ್ಲೆಗಳು: 15
- ಆರಂಭಿಕ ಅಂಕಗಳಿಗಿಂತ ಏರಿಕೆ: ಶೇ. 20 ಕ್ಕಿಂತ ಹೆಚ್ಚು
- 2025–26: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಸೇರಿ 19 ರಾಜ್ಯ ರ್‍ಯಾಂಕ್‌ಗಳು
ಎಲ್ಲರೂ ಉತ್ತೀರ್ಣರಾಗಬೇಕೆಂಬ ಗುರಿ
ಭಾಗವಹಿಸುವ ಪ್ರತಿಯೊಂದು ಶಾಲೆಯೂ, ದಾಖಲಾದ ಎಲ್ಲ ವಿದ್ಯಾರ್ಥಿಗಳು (ಶೇ. 100 ರಷ್ಟು) ಉತ್ತೀರ್ಣರಾಗುವ ಗುರಿಯತ್ತ ನಮ್ಮೊಂದಿಗೆ ಕೆಲಸ ಮಾಡುತ್ತದೆ. 2025–26ರಲ್ಲಿ ಶೇ. 99 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದರು.
ತಂತ್ರಜ್ಞಾನದ ನೆರವು
ಎಸ್‌ಎಸ್‌ಎಲ್‌ಸಿ ಟಾಪ್ ಅಪ್ ಆ್ಯಪ್‌ನಲ್ಲಿ ಹಾಜರಾತಿ, ಪಠ್ಯಕ್ರಮ ಎಷ್ಟು ಮುಗಿದಿದೆ ಮತ್ತು ಪ್ರತಿ ವಿದ್ಯಾರ್ಥಿಯ ಸಾಧನೆಯ ದಾಖಲೆ ಇರುತ್ತದೆ. ಇದರಿಂದ CSR ಲೆಕ್ಕಪರಿಶೋಧನೆಗೆ ಬೇಕಾದ ವರದಿಗಳು ಸಿದ್ಧವಾಗಿರುತ್ತವೆ.
ಇದು ಹೇಗೆ ನಡೆಯುತ್ತದೆ
ಶಾಲೆಗಳ ಆಯ್ಕೆ, ವಿದ್ಯಾರ್ಥಿಗಳ ನೋಂದಣಿ, ಎಲ್ಲ ವಿಷಯಗಳಲ್ಲಿ ಆರಂಭಿ ಕ ಪರೀಕ್ಷೆ ಮತ್ತು ಶಿಕ್ಷಕರಿಗೆ ಕಾರ್ಯಕ್ರಮದ ಪರಿಚಯ.
ಶಾಲೆಯ ನಂತರ ಪ್ರತಿದಿನ 4 ವಿಷಯಗಳ ತರಗತಿಗಳು, ನಿಯಮಿತ ಮಾರ್ಗದರ್ಶನ ಮತ್ತು ಹಾಜರಾತಿಯ ಮೇಲ್ವಿಚಾರಣೆ.
ಮಧ್ಯಂತರ ಪರಿಶೀಲನೆ, ಪ್ರತಿ ವಾರ ಮಾದರಿ ಪರೀಕ್ಷೆ, ತೀವ್ರ ಪುನರಾವರ್ತನೆ ಮತ್ತು ವಾರಾಂತ್ಯದಲ್ಲಿ ಜೀವನ ಕೌಶಲ ತರಗತಿಗಳು.
ಕೊನೆಯ ಹಂತದ ಪಾಠದ ನೆರವು, ವೃತ್ತಿ ಮಾರ್ಗದರ್ಶನ, ಅಂತಿಮ ಪರೀಕ್ಷೆ ಮತ್ತು ಪ್ರತಿ ವಿದ್ಯಾರ್ಥಿಯ ಸಾಧನೆಯ ವಿಶ್ಲೇಷಣೆ.
ಈ ತರಗತಿಗಳಿಂದ ನಾನು ಓದುವ ರೀತಿಯೇ ಬದಲಾಯಿತು. ತರಗತಿಗೆ ಹೋಗಲು ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಏಳುತ್ತಿದ್ದೆ.
Vedavathi · ಬಾಗಲಗುಂಟೆ · ಶೇ. 98.72





