- ಎಲ್ಲಿ
- ಕರ್ನಾಟಕ ಮತ್ತು ತಮಿಳುನಾಡು
- ಜೊತೆಗೆ
- Vistaar Finance
- ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs)
- ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) 2, 3, 10
ಕಾರ್ಯಕ್ರಮದ ಪರಿಚಯ
ಸ್ವಾಸ್ಥ್ಯ ಸಂಕಲ್ಪ, Vistaar Finance ಸಂಸ್ಥೆಯ CSR ಯೋಜನೆಯಾಗಿ ನಡೆಯುವ ಆರೋಗ್ಯ ಕಾರ್ಯಕ್ರಮ. ಆರೋಗ್ಯ ಸೇವೆ ಸುಲಭವಾಗಿ ಸಿಗದ ಸಮುದಾಯಗಳು ಆಸ್ಪತ್ರೆಗೆ ಬರಲಿ ಎಂದು ಕಾಯುವ ಬದಲು, ಈ ಕಾರ್ಯಕ್ರಮ ಉತ್ತಮ ಚಿಕಿತ್ಸೆಯನ್ನು ಅವರ ಬಳಿಗೇ ಕೊಂಡೊಯ್ಯುತ್ತದೆ. ಇದಕ್ಕಾಗಿ ಸಂಚಾರಿ ವೈದ್ಯಕೀಯ ಘಟಕಗಳು (MMU) ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತವೆ.
ಸಂಚಾರಿ ಘಟಕಗಳು
ಮಾರ್ಚ್ 2026ರ ವೇಳೆಗೆ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 15 ಸಂಚಾರಿ ವೈದ್ಯಕೀಯ ಘಟಕಗಳು ನಿರಂತರವಾಗಿ ಸೇವೆ ನೀಡುತ್ತಿವೆ.
ಶಿಬಿರಗಳಿಂದ ಸಿಗುವ ಸೇವೆ
ಸಾಮಾನ್ಯ ತಪಾಸಣೆಯಷ್ಟೇ ಅಲ್ಲ, MMU ಜಾಲದಿಂದ ನಿಜವಾದ ಚಿಕಿತ್ಸೆಯೂ ಸಾಧ್ಯವಾಗಿದೆ. ಶಿಬಿರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರಿಗೆ ಚಿಕಿತ್ಸೆ ದೊರೆತಿದೆ. ಆಸ್ಪತ್ರೆಗಳಿಗೆ ಶಿಫಾರಸು ಮಾಡುವ ಮೂಲಕ ವಿಶೇಷ ಚಿಕಿತ್ಸೆಗಳನ್ನೂ ದೊರಕಿಸಲಾಗಿದೆ.
ಶಿಬಿರಗಳಲ್ಲಿ ದೊಡ್ಡ ಪ್ರಮಾಣದ ಚಿಕಿತ್ಸೆ
- ಮಧುಮೇಹದಿಂದಾದ ಪಾದದ ತೊಂದರೆಗೆ ಶಸ್ತ್ರಚಿಕಿತ್ಸೆ: 500+
- ಮಕ್ಕಳ ಕಣ್ಣಿನ ಶಿಬಿರಗಳು: 450+
- ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ: 180+
ಶಿಫಾರಸಿನ ಮೂಲಕ ವಿಶೇಷ ಚಿಕಿತ್ಸೆ
9 ಪಾರ್ಟ್ನರ್ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ.
- ಸೊಂಟ ಮತ್ತು ಮಂಡಿ ಕೀಲು ಬದಲಾವಣೆ: 10+
- ಅಪಸ್ಮಾರ (ಮೂರ್ಛೆ ರೋಗ) ಚಿಕಿತ್ಸೆ: 10+
- ಸೀಳುತುಟಿ ಸರಿಪಡಿಸುವ ಶಸ್ತ್ರಚಿಕಿತ್ಸೆ: 10+
ಸಂಚಾರಿ ವೈದ್ಯಕೀಯ ಘಟಕಗಳು
ಆರೋಗ್ಯ ಸೇವೆ ಸುಲಭವಾಗಿ ಸಿಗದ ಗ್ರಾಮೀಣ ಸಮುದಾಯಗಳಿಗೆ ಉಚಿತ ಆಂಬ್ಯುಲೆನ್ಸ್ ಮತ್ತು MMU ಸೇವೆ ನೀಡಲಾಗುತ್ತದೆ. ತಾತ್ಕಾಲಿಕ ವಸತಿ ಪ್ರದೇಶಗಳ ಕುಟುಂಬಗಳು, ವಲಸೆ ಕಾರ್ಮಿಕರು ಮತ್ತು ರಸ್ತೆ ಅಪಘಾತದಲ್ಲಿ ಗಾಯಗೊಂಡವರು ಈ ಸೇವೆ ಪಡೆಯುತ್ತಾರೆ. ಕಾಯಿಲೆ ಬಾರದಂತೆ ತಡೆಯುವ ಆರೈಕೆಯೂ ಇರುತ್ ತದೆ. ಅಗತ್ಯವಿದ್ದರೆ ಪಾರ್ಟ್ನರ್ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ.
- ಆಂಬ್ಯುಲೆನ್ಸ್ ಮೂಲಕ 3,500+ ರೋಗಿಗಳಿಗೆ ಸೇವೆ · 50,000+ ಕಿ.ಮೀ. ಪ್ರಯಾಣ
- 180+ ಶಾಲೆಗಳಲ್ಲಿ ಆರೋಗ್ಯ ಶಿಬಿರಗಳು
- ತಾತ್ಕಾಲಿಕ ವಸತಿ ಪ್ರದೇಶಗಳಲ್ಲಿ ನೈರ್ಮಲ್ಯದ ಅರಿವು
- ಸ್ಥಳೀಯ ಆಸ್ಪತ್ರೆಗಳೊಂದಿಗೆ ಸಮನ್ವಯ
ನಮ್ಮ ಪಾರ್ಟ್ನರ್ಗಳು
ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳೊಂದಿಗಿನ ಪಾರ್ಟ್ನರ್ಶಿಪ್ನಿಂದ ಈ ಯೋಜನೆ ಇಷ್ಟು ಜನರನ್ನು ತಲುಪುತ್ತಿದೆ. ಎರಡು ರಾಜ್ಯಗಳಲ್ಲಿ ಪಾರ್ಟ್ನರ್ಗಳ ಎರಡು ಜಾಲಗಳಿವೆ:
ಕರ್ನಾಟಕ
- Youth for Seva: ಬೀದರ್ ಮತ್ತು ಚಾಮರಾಜನಗರ
- Dr Bhalki Hospital: ರಾಯಚೂರು
- Radon Cancer Foundation: ಹುಬ್ಬಳ್ಳಿ
- Karuna Trust: 2 ಘಟಕಗಳು, ತುಮಕೂರು ಜಿಲ್ಲೆ
- KS Hospital & HSP: ಹೊಸಪೇಟೆ, ವಿಜಯನಗರ ಜಿಲ್ಲೆ
- Q Medical Center & Hospital: ಬೆಂಗಳೂರು ಗ್ರಾಮಾಂತರ
- Lakeview Foundation: ಬೆಳಗಾವಿ
- ಸಹನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ: ಮುಧೋಳ
- ಸಹನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ: ವಿಜಯಪುರ
- ಸುಕೃತಿ ಸ್ವಯಂ ಸೇವಾ ಸಂಸ್ಥೆ: ಗ್ರಾಮೀಣ ಮತ್ತು ನಗರಾಭಿವೃದ್ಧಿ, ಹಾವೇರಿ
ತಮಿಳುನಾಡು
- Seva Bharathi TN: ತಮಿಳುನಾಡಿನ ಜಾಲದ ಮುಖ್ಯ ಪಾರ್ಟ್ನರ್
- Nanda Medical College & Hospital: ಈರೋಡ್
- Meenakshi Hospital: ಧರ್ಮಪುರಿ
- Narayana Hospital: ವೆಲ್ಲೂರು
- ARPNA Trust & Balaji Hospital: ಸೀರ್ಕಾಳಿ, ಮಯಿಲಾಡುತುರೈ ಜಿಲ್ಲೆ
- Sri Venkateshwara Medcity Hospital: ಉತ್ತರ ಚೆನ್ನೈ
- VELS Medical College Hospital: ತಿರುವಳ್ಳೂರು
- Swamy Vivekananda Medical College: ನಾಮಕ್ಕಲ್






