ಜಾರಿಗೆ ಬರುವ ದಿನಾಂಕ: 22 ಆಗಸ್ಟ್ 2026 · ಕೊನೆಯ ಪರಿಷ್ಕರಣೆ: 22 ಆಗಸ್ಟ್ 2026
ಸಮರ್ಪಕ ಸೇವಾ ಟ್ರಸ್ಟ್ನ ವೆಬ್ಸೈಟ್ಗೆ (samarpaka.org) ಸ್ವಾಗತ. ಈ ವೆಬ್ಸೈಟ್ ಅನ್ನು ತೆರೆದರೆ ಅಥವಾ ಬಳಸಿದರೆ, ಈ ಕೆಳಗಿನ ನಿಯಮ ಮತ್ತು ಷರತ್ತುಗಳನ್ನು ಪಾಲಿಸಲು ಮತ್ತು ಅವುಗಳಿಗೆ ಬದ್ಧರಾಗಿರಲು ನೀವು ಒಪ್ಪಿದಂತೆ. ಈ ವೆಬ್ಸೈಟ್, ನಮ್ಮ ಕಾರ್ಯಕ್ರಮಗಳು ಮತ್ತು ನಮ್ಮ ದೇಣಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಸಮರ್ಪಕ ಸೇವಾ ಟ್ರಸ್ಟ್ ಮತ್ತು ನಿಮ್ಮ ನಡುವಿನ ಸಂಬಂಧವನ್ನು ಈ ನಿಯಮಗಳು ನಿರ್ಧರಿಸುತ್ತವೆ. ಈ ನಿಯಮಗಳ ಯಾವುದೇ ಭಾಗಕ್ಕೆ ನಿಮ್ಮ ಒಪ್ಪಿಗೆ ಇಲ್ಲದಿದ್ದರೆ, ದಯವಿಟ್ಟು ನಮ್ಮ ವೆಬ್ಸೈಟ್ ಬಳಸಬೇಡಿ.
ನಿಯಮಗಳಿಗೆ ಒಪ್ಪಿಗೆ
ಈ ವೆಬ್ಸೈಟ್ ಅನ್ನು ತೆರೆದರೆ, ಈ ನಿಯಮಗಳಿಗೆ ಮತ್ತು ಅನ್ವಯವಾಗುವ ಎಲ್ಲ ಕಾನೂನು ಮತ್ತು ನಿಬಂಧನೆಗಳಿಗೆ ಬದ್ಧರಾಗಿರಲು ನೀವು ಒಪ್ಪಿದಂತೆ. ಈ ನಿಯಮಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಬಹುದು. ಬದಲಾವಣೆಗಳನ್ನು ತಿಳಿಯಲು ಈ ಪುಟವನ್ನು ಆಗಾಗ ನೋಡುವುದು ನಿಮ್ಮ ಜವಾಬ್ದಾರಿ.
ಬೌದ್ಧಿಕ ಆಸ್ತಿ
ಬೇರೆ ರೀತಿ ತಿಳಿಸದ ಹೊರತು, ಈ ಸೈಟ್ನಲ್ಲಿರುವ ಪಠ್ಯ, ಚಿತ್ರಗಳು, ಗ್ರಾಫಿಕ್ಸ್, ಲೋಗೋಗಳು, ಪರಿಣಾಮ ವರದಿಗಳು ಮತ್ತು ಮಲ್ಟಿಮೀಡಿಯಾ ಸೇರಿದಂತೆ (ಆದರೆ ಇವಿಷ್ಟಕ್ಕೇ ಸೀಮಿತವಾಗದೆ) ಎಲ್ಲ ವಿಷಯವೂ ಸಮರ್ಪಕ ಸೇವಾ ಟ್ರಸ್ಟ್ನ ಸ್ವತ್ತು. ಅನುಮತಿ ಇಲ್ಲದೆ ಇವನ್ನು ಬಳಸಿದರೆ ಕೃತಿಸ್ವಾಮ್ಯ (copyright), ಟ್ರೇಡ್ಮಾರ್ಕ್ ಮತ್ತು ಇತರ ಕಾನೂನುಗಳ ಉಲ್ಲಂಘನೆಯಾಗಬಹುದು.
ಈ ವೆಬ್ಸೈಟ್ನ ಸಾಮಗ್ರಿಗಳನ್ನು ವೈಯಕ್ತಿಕ ಮತ್ತು ವಾಣಿಜ್ಯೇತರ ಉದ್ದೇಶಗಳಿಗೆ ನೋಡಲು ಮತ್ತು ಬಳಸಲು ನಿಮಗೆ ಸೀಮಿತ ಪರವಾನಗಿ ನೀಡಲಾಗಿದೆ. ಸಮರ್ಪಕ ಸೇವಾ ಟ್ರಸ್ಟ್ನ ಪೂರ್ವ ಲಿಖಿತ ಅನುಮತಿ ಇಲ್ಲದೆ ಈ ವಿಷಯವನ್ನು ನಕಲು ಮಾಡುವುದು, ವಿತರಿಸುವುದು ಅಥವಾ ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ.
ವೆಬ್ಸೈಟ್ ಬಳಕೆ
ಈ ವೆಬ್ಸೈಟ್ ಅನ್ನು ಕಾನೂನುಬದ್ಧ ಉದ್ದೇಶಗಳಿಗೆ ಮಾತ್ರ ಬಳಸುತ್ತೀರಿ ಎಂದು ನೀವು ಒಪ್ಪುತ್ತೀರಿ. ನಿಮ್ಮ ಬಳಕೆ ಬೇರೆಯವರ ಹಕ್ಕುಗಳನ್ನು ಉಲ್ಲಂಘಿಸಬಾರದು, ಅಥವ ಾ ಬೇರೆಯವರು ಈ ಸೈಟ್ ಬಳಸುವುದನ್ನು ನಿರ್ಬಂಧಿಸಬಾರದು ಅಥವಾ ತಡೆಯಬಾರದು. ಕಿರುಕುಳ ನೀಡುವ, ಆಕ್ಷೇಪಾರ್ಹ, ವಂಚನೆಯ ಅಥವಾ ಕಾನೂನುಬಾಹಿರ ನಡವಳಿಕೆಗೆ ಅವಕಾಶವಿಲ್ಲ.
ಬಳಕೆದಾರರು ಸಲ್ಲಿಸುವ ವಿಷಯ
ಅಭಿಪ್ರಾಯಗಳು (testimonials), ಕಾಮೆಂಟ್ಗಳು, ಫೋಟೋಗಳು, ಸ್ವಯಂಸೇವಕ ಅರ್ಜಿಗಳು ಅಥವಾ ಕಾರ್ಯಕ್ರಮ ಮತ್ತು ಸಮಾರಂಭಗಳ ನೋಂದಣಿಗಳಂತಹ ಯಾವುದೇ ವಿಷಯವನ್ನು ನೀವು ಈ ವೆಬ್ಸೈಟ್ ಮೂಲಕ ಸಲ್ಲಿಸಿದಾಗ, ಅದನ್ನು ಟ್ರಸ್ಟ್ನ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಉದ್ದೇಶಕ್ಕೆ (ಪರಿಣಾಮ ವರದಿಗಳು, CSR ಪಾರ್ಟ್ನರ್ಗಳಿಗೆ ನೀಡುವ ಪ್ರಸ್ತುತಿಗಳು ಮತ್ತು ಪ್ರಚಾರ ಸಾಮಗ್ರಿ ಸೇರಿದಂತೆ) ಬಳಸುವ, ನಕಲು ಮಾಡುವ, ಮಾರ್ಪಡಿಸುವ ಮತ್ತು ಪ್ರಕಟಿಸುವ ಹಕ್ಕನ್ನು ನೀವು ಸಮರ್ಪಕ ಸೇವಾ ಟ್ರಸ್ಟ್ಗೆ ನೀಡುತ್ತೀರಿ. ಈ ಹಕ್ಕು ಪ್ರತ್ಯೇಕವಲ್ಲದ (non-exclusive), ರಾಯಧನ ರಹಿತ, ಶಾಶ್ವತ ಮತ್ತು ಹಿಂಪಡೆಯಲಾಗದ ಹಕ್ಕಾಗಿರುತ್ತದೆ. ನೀವು ಸಲ್ಲಿಸುವ ವಿಷಯಕ್ಕೆ ನೀವೊಬ್ಬರೇ ಜವಾಬ್ದಾರರು. ಅದು ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸಬಾರದು.
ದೇಣಿಗೆಗ ಳು
UPI, ಬ್ಯಾಂಕ್ ವರ್ಗಾವಣೆ ಅಥವಾ ಆನ್ಲೈನ್ ಪಾವತಿ ಗೇಟ್ವೇ, ಯಾವುದರ ಮೂಲಕ ನೀಡಿದರೂ, ಸಮರ್ಪಕ ಸೇವಾ ಟ್ರಸ್ಟ್ಗೆ ನೀಡುವ ಎಲ್ಲ ದೇಣಿಗೆಗಳು ನಮ್ಮ ಕಾರ್ಯಕ್ರಮಗಳಿಗೆ ನೀವು ಸ್ವಇಚ್ಛೆಯಿಂದ ನೀಡುವ ಕೊಡುಗೆಗಳು. ಸಾಮಾನ್ಯವಾಗಿ ಇವನ್ನು ಹಿಂತಿರುಗಿಸಲಾಗುವುದಿಲ್ಲ. ಕಾನೂನು ಪ್ರಕಾರ ಹಿಂತಿರುಗಿಸಬೇಕಾದಾಗ, ಅಥವಾ ನಿಜವಾದ ವಹಿವಾಟು ದೋಷ ಆದಾಗ ಟ್ರಸ್ಟ್ ತನ್ನ ವಿವೇಚನೆಯಿಂದ ನಿರ್ಧರಿಸಿದರೆ ಮಾತ್ರ ಇದಕ್ಕೆ ವಿನಾಯಿತಿ. ದೇಣಿಗೆ ನೀಡುವಾಗ ನೀವು ಕೊಟ್ಟ ವಿವರಗಳನ್ನೇ ಬಳಸಿ ದೇಣಿಗೆ ರಶೀದಿ ಮತ್ತು 80G ಪ್ರಮಾಣಪತ್ರ ನೀಡಲಾಗುತ್ತದೆ. ಈ ವಿವರಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ.
ಕಾರ್ಯಕ್ರಮ ಮತ್ತು ಸಮಾರಂಭಗಳ ನೋಂದಣಿ
ಸಮರ್ಪಕ ಸೇವಾ ಟ್ರಸ್ಟ್ ನಡೆಸುವ ಕಾರ್ಯಕ್ರಮಗಳು, ತರಗತಿಗಳು, ಕಾರ್ಯಾಗಾರಗಳು ಮತ್ತು ಸನ್ಮಾನ ಸಮಾರಂಭಗಳ ಎಲ್ಲ ನೋಂದಣಿಗಳು ಸ್ಥಳಾವಕಾಶ ಮತ್ತು ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತವೆ. ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭವನ್ನು ಯಾವಾಗ ಬೇಕಾದರೂ ರದ್ದುಗೊಳಿಸುವ, ಬದಲಿಸು ವ ಅಥವಾ ಬೇರೆ ದಿನಕ್ಕೆ ಮುಂದೂಡುವ ಹಕ್ಕು ಸಮರ್ಪಕ ಸೇವಾ ಟ್ರಸ್ಟ್ಗೆ ಇದೆ. ಹಾಗೆ ಮಾಡಿದಾಗ, ನೋಂದಣಿ ಸಮಯದಲ್ಲಿ ನೀಡಿದ ಸಂಪರ್ಕ ವಿವರಗಳ ಮೂಲಕ ನೋಂದಾಯಿಸಿದವರಿಗೆ ತಿಳಿಸಲಾಗುತ್ತದೆ.
ಇತರ ವೆಬ್ಸೈಟ್ಗಳ ಲಿಂಕ್ಗಳು
ಈ ವೆಬ್ಸೈಟ್ನಲ್ಲಿ CSR ಪಾರ್ಟ್ನರ್ಗಳ ಸೈಟ್ಗಳು, ಪಾವತಿ ಗೇಟ್ವೇಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಸೇರಿದಂತೆ ಮೂರನೇ ವ್ಯಕ್ತಿಗಳು ನಡೆಸುವ ಹೊರಗಿನ ವೆಬ್ಸೈಟ್ಗಳ ಲಿಂಕ್ಗಳು ಇರಬಹುದು. ಈ ಹೊರಗಿನ ಸೈಟ್ಗಳ ವಿಷಯಕ್ಕೆ ಅಥವಾ ಖಾಸಗಿತನ ನೀತಿಗಳಿಗೆ ಸಮರ್ಪಕ ಸೇವಾ ಟ್ರಸ್ಟ್ ಜವಾಬ್ದಾರವಲ್ಲ. ಅವುಗಳನ್ನು ತೆರೆಯುವುದು ನಿಮ್ಮ ಸ್ವಂತ ಹೊಣೆಯ ಮೇಲೆ. ಯಾವುದೇ ಮೂರನೇ ವ್ಯಕ್ತಿಯ ಸೈಟ್ ಬಳಸುವ ಮೊದಲು ಅದರ ನಿಯಮಗಳು ಮತ್ತು ನೀತಿಗಳನ್ನು ಓದಿ ನೋಡುವಂತೆ ನಾವು ಸಲಹೆ ನೀಡುತ್ತೇವೆ.
ಹೊಣೆಗಾರಿಕೆಯ ಮಿತಿ
ಈ ವೆಬ್ಸೈಟ್ ಬಳಕೆಯಿಂದ ಅಥವಾ ಅದನ್ನು ಬಳಸಲು ಸಾಧ್ಯವಾಗದ್ದರಿಂದ ಉಂಟಾಗುವ ಯಾವುದೇ ನೇರ, ಪರೋಕ್ಷ, ಆಕಸ್ಮಿಕ ಅಥವಾ ಪರಿಣಾಮರೂಪದ ನಷ್ಟಗಳಿಗೆ ಸಮರ್ಪಕ ಸೇವಾ ಟ್ರಸ್ಟ್ ಹೊಣೆಯಾಗುವ ುದಿಲ್ಲ. ವಿಷಯದಲ್ಲಿನ ಯಾವುದೇ ದೋಷ, ಲೋಪ ಅಥವಾ ತಪ್ಪು ಮಾಹಿತಿ, ಹಾಗೂ ಮೂರನೇ ವ್ಯಕ್ತಿ ಸೇವಾ ಪೂರೈಕೆದಾರರಿಂದ ದೇಣಿಗೆ ಅಥವಾ ಪಾವತಿ ಪ್ರಕ್ರಿಯೆಯಲ್ಲಿ ಉಂಟಾಗುವ ಯಾವುದೇ ಅಡಚಣೆಯೂ ಇದರಲ್ಲಿ ಸೇರಿವೆ.
ಅನ್ವಯವಾಗುವ ಕಾನೂನು
ಈ ನಿಯಮ ಮತ್ತು ಷರತ್ತುಗಳು ಭಾರತದ ಕರ್ನಾಟಕದ ಕಾನೂನುಗಳಿಗೆ ಒಳಪಟ್ಟಿವೆ ಮತ್ತು ಅವುಗಳ ಪ್ರಕಾರವೇ ಇವನ್ನು ಅರ್ಥೈಸಲಾಗುತ್ತದೆ. ಕಾನೂನುಗಳ ಸಂಘರ್ಷಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಇದಕ್ಕೆ ಪರಿಗಣಿಸುವುದಿಲ್ಲ. ಈ ವೆಬ್ಸೈಟ್ ಬಳಕೆಯಿಂದ ಉಂಟಾಗುವ ಯಾವುದೇ ಕಾನೂನು ವಿವಾದಗಳು ಕರ್ನಾಟಕದ ಬೆಂಗಳೂರಿನಲ್ಲಿರುವ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡುತ್ತವೆ.
ನಿಯಮ ಮತ್ತು ಷರತ್ತುಗಳಲ್ಲಿ ಬದಲಾವಣೆ
ಈ ನಿಯಮ ಮತ್ತು ಷರತ್ತುಗಳನ್ನು ಯಾವಾಗ ಬೇಕಾದರೂ ಬದಲಿಸುವ ಅಥವಾ ಹೊಸ ನಿಯಮಗಳಿಂದ ಬದಲಾಯಿಸುವ ಹಕ್ಕು ಸಮರ್ಪಕ ಸೇವಾ ಟ್ರಸ್ಟ್ಗೆ ಇದೆ. ಬದಲಾವಣೆಗಳ ನಂತರವೂ ನೀವು ವೆಬ್ಸೈಟ್ ಬಳಸುವುದನ್ನು ಮುಂದುವರಿಸಿದರೆ, ಪರಿಷ್ಕೃತ ನಿಯಮಗಳನ್ನು ನೀವು ಒಪ್ಪಿದ್ದೀರಿ ಎಂದು ಪರಿಗಣಿಸಲಾಗುತ್ತದೆ.