top of page
ಸಮರ್ಪಕ ಸೇವಾ ಟ್ರಸ್ಟ್ಶಿಕ್ಷಣ · ಸಬಲೀಕರಣ · ಸ್ವಾವಲಂಬನೆEN|ಕನ್ನಡ
ನಮ್ಮ ಕೆಲಸ

ನಾಲ್ಕು ಕ್ಷೇತ್ರಗಳು, ಹತ್ತು ಕಾರ್ಯಕ್ರಮಗಳು

ಪ್ರತಿ ಕಾರ್ಯಕ್ರಮವನ್ನು ಪಾರ್ಟ್‌ನರ್ ಜೊತೆಗೂಡಿ ರೂಪಿಸಲಾಗುತ್ತದೆ, ತರಬೇತಿ ಪಡೆದ ಸ್ಥಳೀಯ ತಂಡಗಳು ಜಾರಿಗೊಳಿಸುತ್ತವೆ, ಮತ್ತು ಲೆಕ್ಕಪರಿಶೋಧನೆಗೆ ಸಿದ್ಧವಾದ ದಾಖಲೆಗಳೊಂದಿಗೆ ವರದಿ ಮಾಡಲಾಗುತ್ತದೆ.

ಶಿಕ್ಷಣ

ಮಕ್ಕಳನ್ನು ಶಾಲೆಯಲ್ಲೇ ಉಳಿಸುವ ಕಲಿಕೆ

ಗ್ರಾಮೀಣ ಭಾಗದ 10ನೇ ತರಗತಿ ವಿದ್ಯಾರ್ಥಿಗಳಿಗೆ SSLC ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತದೆ. ಶಾಲೆ ಮುಗಿದ ನಂತರದ ಕಲಿಕೆಗಾಗಿ ಗ್ರಾಮೀಣ ಕರ್ನಾಟಕದಲ್ಲಿ ಕಲಿಕಾ ಕೇಂದ್ರಗಳನ್ನು ಮತ್ತು ವಯನಾಡಿನಲ್ಲಿ ಪಡನ ಕೇಂದ್ರವನ್ನು ನಡೆಸಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ಟಾಪ್ ಅಪ್

ಎಸ್‌ಎಸ್‌ಎಲ್‌ಸಿ ಟಾಪ್ ಅಪ್

ಹಳ್ಳಿಯ ತರಗತಿಯಿಂದಲೇ ಪರೀಕ್ಷೆಗೆ ಸಿದ್ಧತೆ

ಕರ್ನಾಟಕದ ಗ್ರಾಮೀಣ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯ ನಂತರ 4 ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ. ನಾಲ್ಕು ವಿಷಯಗಳ ಪಾಠದ ಜೊತೆಗೆ ವಾರಾಂತ್ಯದಲ್ಲಿ ಜೀವನ ಕೌಶಲ ತರಗತಿಗಳೂ ಇರುತ್ತವೆ.

20,000+ತರಬೇತಿ ಪಡೆದ ವಿದ್ಯಾರ್ಥಿಗಳು
ಕಲಿಕಾ ಕೇಂದ್ರ

ಕಲಿಕಾ ಕೇಂದ್ರ

ಪ್ರತಿ ಸಂಜೆ ಕಲಿಯಲು ಒಂದು ಸುರಕ್ಷಿತ ಜಾಗ

ಗ್ರಾಮೀಣ ಕರ್ನಾಟಕದ ಕಲಿಕಾ ಕೇಂದ್ರಗಳಲ್ಲಿ ಸಂಜೆ 5 ರಿಂದ 7 ರವರೆಗೆ, ಕುಟುಂಬದಲ್ಲಿ ಮೊದಲ ಬಾರಿ ಶಾಲೆಗೆ ಹೋಗುವ ಮಕ್ಕಳಿಗೆ ಓದಿನ ನೆರವು ಮತ್ತು ಸುರಕ್ಷಿತ ಜಾಗ.

60+ನಡೆಯುತ್ತಿರುವ ಕೇಂದ್ರಗಳು
ಪಡನ ಕೇಂದ್ರ

ಪಡನ ಕೇಂದ್ರ

ತರಗತಿಯ ಪಾಠಕ್ಕೆ ಒಂದು ಸೇತುವೆ

ಕೇರಳದ ವಯನಾಡ್‌ನ ಬುಡಕಟ್ಟು ಮಕ್ಕಳಿಗೆ ಇದು ಭಾಷೆ ಮತ್ತು ಕಲಿಕೆಯ ಸೇತುವೆ. ಪ್ರತಿದಿನ ಮಾರ್ಗದರ್ಶನ, ಓದಲು ನೆಮ್ಮದಿಯ ಜಾಗ ಮತ್ತು ಪೌಷ್ಟಿಕ ಆಹಾರದ ನೆರವು ಇಲ್ಲಿ ಸಿಗುತ್ತದೆ.

12ವಯನಾಡ್‌ನಲ್ಲಿ ಕೇಂದ್ರಗಳು
ಆರೋಗ್ಯ

ಮನೆ ಬಾಗಿಲಿಗೇ ಆರೋಗ್ಯ ಸೇವೆ

ಕೊಳೆಗೇರಿ ನಿವಾಸಿಗಳು, ವಲಸಿಗರು, ಕಾರ್ಮಿಕರು ಮತ್ತು ಅಪಘಾತಕ್ಕೊಳಗಾದವರು ಸೇರಿದಂತೆ ಗ್ರಾಮೀಣ ಭಾಗದ ಸೌಲಭ್ಯ ವಂಚಿತ ಸಮುದಾಯಗಳಿಗೆ ಉಚಿತ ಆಂಬ್ಯುಲೆನ್ಸ್ ಮತ್ತು ಸಂಚಾರಿ ವೈದ್ಯಕೀಯ ಘಟಕದ ಸೇವೆ ಸಿಗುತ್ತದೆ. ರೋಗ ತಡೆಗಟ್ಟುವ ಆರೈಕೆಯ ಜೊತೆಗೆ, ಪಾರ್ಟ್‌ನರ್ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ.

ಸ್ವಾಸ್ಥ್ಯ ಸಂಕಲ್ಪ

ಸ್ವಾಸ್ಥ್ಯ ಸಂಕಲ್ಪ

ಆರೋಗ್ಯ ಸೇವೆ ಸುಲಭವಾಗಿ ಸಿಗದ ಸಮುದಾಯಗಳ ಮನೆಬಾಗಿಲಿಗೆ ಚಿಕಿತ್ಸೆ

Vistaar Finance ಸಂಸ್ಥೆಯ CSR ಯೋಜನೆಯಾಗಿ, 15 ಸಂಚಾರಿ ವೈದ್ಯಕೀಯ ಘಟಕಗಳು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತವೆ.

16,000+ಪ್ರತಿ ತಿಂಗಳ ಆರೋಗ್ಯ ತಪಾಸಣೆಗಳು
ಗರ್ಭ ಸಂಸ್ಕಾರ

ಗರ್ಭ ಸಂಸ್ಕಾರ

ತಾಯಿ ಮತ್ತು ಮಗುವಿನ ಆರೈಕೆ

ದಕ್ಷಿಣ ಬೆಂಗಳೂರಿನ ಕಟ್ಟಡ ಕಾರ್ಮಿಕರ ಸಮುದಾಯಗಳ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ, ಆಯುರ್ವೇದ ಮತ್ತು ಪೌಷ್ಟಿಕ ಆಹಾರದ ಮೂಲಕ ಹೆರಿಗೆಗೆ ಮೊದಲು ಮತ್ತು ನಂತರ ಆರೈಕೆ ನೀಡಲಾಗುತ್ತದೆ.

300+ನೆರವು ಪಡೆದ ತಾಯಂದಿರು
ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯ

ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯ

ಘನತೆಯಿಂದ, ಪ್ರತಿದಿನ ಶಾಲೆಗೆ

ಹದಿಹರೆಯದ ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ಶಾಲೆಗೆ ಬರುವಂತೆ ಅರಿವು ತರಗತಿಗಳು, ನೈರ್ಮಲ್ಯ ಕಿಟ್‌ಗಳು ಮತ್ತು ಶಿಕ್ಷಕರು, ಪೋಷಕರಿಗೆ ಕಾರ್ಯಾಗಾರಗಳು.

1,200+ಅರಿವು ಪಡೆದ ಹೆಣ್ಣುಮಕ್ಕಳು
ಜೀವನೋಪಾಯ ಮತ್ತು ಸೇರ್ಪಡೆ

ಗೌರವದ ಬದುಕಿಗೆ ಕೌಶಲ

ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ, ಆತ್ಮವಿಶ್ವಾಸದಿಂದ ಬದುಕಲು ಕ್ರಮಬದ್ಧ ವೃತ್ತಿ ತರಬೇತಿ ನೀಡಲಾಗುತ್ತದೆ. ದಿವ್ಯಾಂಗರು ಮತ್ತು ತೃತೀಯಲಿಂಗಿಗಳಿಗೆ ಕೌಶಲ ತರಬೇತಿ ಹಾಗೂ ಜೀವನೋಪಾಯಕ್ಕೆ ನೆರವು ಸಿಗುತ್ತದೆ.

ನೀರು ಮತ್ತು ನೈರ್ಮಲ್ಯ

ಶುದ್ಧ ನೀರು, ಸುರಕ್ಷಿತ ಶೌಚಾಲಯ

ಗ್ರಾಮೀಣ ಶಾಲೆಗಳಲ್ಲಿ RO ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಕೈ ತೊಳೆಯುವ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ; ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ.

ನಮ್ಮ ಇತರ ಕೆಲಸಗಳು

ಹಳ್ಳಿಗಳು, ವಿದ್ಯಾರ್ಥಿವೇತನಗಳು ಮತ್ತು ಕಲ್ಯಾಣಿಗಳು

ಗ್ರಾಮೀಣ ಕರ್ನಾಟಕದ 15 ಹಳ್ಳಿಗಳಲ್ಲಿ ಸಮಗ್ರ ಅಭಿವೃದ್ಧಿ (ಸೌರ ದೀಪ, ಗೋಬರ್ ಗ್ಯಾಸ್ ಮತ್ತು ಸಾವಯವ ಕೃಷಿ), ₹25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿವೇತನ, 1,000 ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಕಿಟ್‌ಗಳು ಮತ್ತು ಹಳೆಯ ಕಲ್ಯಾಣಿಗಳ ಪುನಶ್ಚೇತನ.

ದೇಣಿಗೆ ನೀಡಿ

ನಿಮ್ಮ ದೇಣಿಗೆ ಈ ಕೆಲಸವನ್ನು ಮುಂದುವರಿಸುತ್ತದೆ

₹2,100 ಗ್ರಾಮೀಣ 10ನೇ ತರಗತಿ ವಿದ್ಯಾರ್ಥಿಯೊಬ್ಬರಿಗೆ ನಾಲ್ಕು ತಿಂಗಳ SSLC ಪರೀಕ್ಷಾ ತರಬೇತಿ ಒದಗಿಸುತ್ತದೆ.

ಪಾರ್ಟ್‌ನರ್

ನಮ್ಮೊಂದಿಗೆ CSR ಕಾರ್ಯಕ್ರಮ ರೂಪಿಸಿ

ಶಿಕ್ಷಣ, ಆರೋಗ್ಯ, ಜೀವನೋಪಾಯ ಹಾಗೂ ನೀರು ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ, ಒಂದು ಜಿಲ್ಲೆಯಿಂದ ಹಲವು ಜಿಲ್ಲೆಗಳವರೆಗೆ, ಯೋಜನೆಯಿಂದ ಅನುಷ್ಠಾನ ಮತ್ತು ವರದಿಯವರೆಗೆ ಸಂಪೂರ್ಣ ನಿರ್ವಹಣೆ.

bottom of page